A little note to my lost soul !!

Dear Soul,

Sorry!!

I know you are lost in the midst trying to find and fit yourself in the crowd which even doesn’t belong to you. What next?

Will you be able to bounce back, come on !!

Listen to  Yava Mohana Murali kareyithu or Sita Kalayana vibhoghame or even Ek Pyar Ka Naghma Hai  does these things  really heel you, soch lo ek baar.

What are the scars you have done to me may be the list requires plenty of pages to write down

Am I really happy with the things, a big awkward silence, Remember the signs shows you have 5% depression.

As I remember the days of Engg where I dreamt of having things which could literally makes me happy is now just a myth!! You have everything you have dream of now , I guess you can’t buy one thing yeah, “Peace of Mind” .

I know you are not a party freak or you don’t even like to hangout even on weekends, you just love to read a book with a cup of coffee and enjoying the rain.

The dream of writing a book, solo trip ,trekking ,road trip and finding that one person like the girl who searches in the movie Charlie !!

By the end of the day if I sit and focus on what I need yet again it is a big zero.

A decent paid job, small promotion now are these your wishes ??

Needs and wants has a huge difference, by the end you are the one who stays with me all along

I hope you heel soon

Yours,

From being a wanderlust to a broken

Mom’s and their imagination !!

There is a cousin ( my best friend too ) of mine whose mom is my Kannada teacher and my mother’s colleague too . They both are like way more than best friends, and have similar thoughts and emotions too.

So on every occasion like festivals or it be any function we visit each other’s house.

Since today was ‘Gowri tadige’ my mom visited their house and my aunt prepares food very tasty 😋 you know that to payasam omg it’s heaven!!! Today’s their gathering was quite unusual their emotions spoke more than their words!! Yeah it was the talk about both daughters(me and my cousin) marriage 🤦🏼‍♀️ !! And the tragic thing is today is Monday and we both of us will be leaving for work today, and additionally this was added to their emotion.

They both started imagining things beyond the limits and their eyes filled, I was moved!!

What shall I say?? My aunt treat me like I am one among my daughters and other side my mom!!

How shall I end this ? Even Shakespeare, William Wordsworth, Kuvempu, KSN world’s best of best poets can’t describe these things !! Some words are left unsaid and can’t be written too, and my Monday enthusiasm went in vain!!

Hope I will over come their emotional words soon!!

ಅವಳು ಮರಳಿ ಬರುವಳೆ !!

ಅದು March 15 2009ರ ಸಂಜೆ ಆಗ ತಾನೆ ನನ್ನ 8ನೇ ತರಗತಿ ಪರೀಕ್ಷೆ ಶುರುವಾಗಿತ್ತು ಮಾರನೇ ದಿನ ಯುಗಾದಿ, ಹೊಸ ಸಂವತ್ಸರದ ಆಗಮನಕ್ಕೆ ಸಜ್ಜಾಗಿದ್ದ ನಾವು, ಆ ಒಂದು ಕರೆ ನಾನು ಆಗ ಊಹಿಸಿರಲಿಲ್ಲ !!

ಅಮ್ಮ ಅಮ್ಮ (ಅಜ್ಜಿ) ಇನ್ನೂ ಇಲ್ಲ ಅಂತ. ಅಜ್ಜನ ನೆನಪೆ ಇಲ್ಲದ ನನಗೆ ಅವಳು ತೊರಿದ್ದ ವಾತ್ಸಲ್ಯ ಪ್ರೀತಿ ಎಲ್ಲವೂ ಈಗ ನೆನಪು !! ಈಗ ಯಾರದರು ಮೊಮ್ಮಕ್ಕಳ ಜೊತೆ ಅಜ್ಜ ಅಜ್ಜಿಯರು ಆಟ ಅಥವಾ ಸುತ್ತಿದ್ದರೆ ಏಲ್ಲೊ ಕಾಣದ ನೊವು ನನ್ನಲ್ಲಿ ಕಾಡುತ್ತದೆ !!ನಾ ಮತ್ತೆ ಮಗುವಾದರೆ ಅವಳು ಮರಳಿ ಬರುವಳೆ !!

ನಮ್ಮಲ್ಲಿ ಇದ್ದ ಮಗುವೊಂದನ್ನಾ ನಾವು ಮರೆತೆವೆ??

ನಾವು ಬೆಳಿತಾ ನಮ್ಮಲ್ಲೆ ಇದ್ದ ತುಂಟತನನಾ ಮರೆಯುತ್ತೇವೆ, “ವಿ ಆರ್ ನೊ ಮೋರ್ ಏ ಕೀಡ್” ಅನ್ನೊ ಟ್ಯಾಗ್ ಲೈನ್ ಅಲ್ಲಿ ಬದುಕುತ್ತೇವೆ ಅಂಥ ಭ್ರಮೆ ನಮ್ಮದು. ಒಂದು ಅಧ್ಯಾಯನದ ಪ್ರಕಾರ ಭಾರತದಲ್ಲಿ ಶೇಕಡ 4.5% ಜನರಿಗೆ ಡೀಪ್ರೆಷನ್ ಇದೆ ಹಾಗು 17.5% ಜನರು ಆತ್ಮ ಹತ್ಯೆ ಮಾಡಿಕೊಳ್ಳುತ್ತಾ ಇದ್ದಾರೆ. ವಿಷಾದದ ಸಂಗತಿ ಅಂದರೆ ನಮ್ಮ ಜನ ಸಂಖ್ಯೆ ಪ್ರಪಂಚದ ಕೇವಲ 17% ಮಾತ್ರ.

ಕೆಲವೊಂದು ಸಮಯದಲ್ಲಿ ಸೋಲಿನ ಅಮಲು ತಲೆಗೆ ಹತ್ತಿದಾಗ ಜೀವನ ಸಾಕಪ್ಪ ಸಾಕು ಅಂತ ಯೋಚನೆ ಮಾಡಿದ್ದು ಇದೆ.ಆದರೆ ಆವತ್ತು ೬೫ ವರ್ಷದ ವ್ಯಕ್ತಿಯ ಉತ್ಸಾಹ ಕಂಡು ಅಬ್ಬಾ ಜೀವನ ೬0ರ ನಂತರ ಮತ್ತೆ ಶುರುವಾಗುತ್ತದೆ ಅನ್ನುವುದನ್ನು ನಿಜ ಅಂತ ಜಗತ್ತಿಗೆ ಸಾರಿ ಸಾರಿ ಹೇಳಿದ ಹಾಗೆ ಇತ್ತು. ಆದರೆ ಅಲ್ಲಿಂದ ಆಚೆ ಬಂದರೆ ಆದೆ ಸುಮಾರು ೫೦ ವರ್ಷದ ವ್ಯಕ್ತಿ ಇನ್ನೊಂದು ೨ ವರ್ಷ ಇಲ್ಲಿಗೆ ಬಂದು ದೇವರ ಸೇವೆ ಮಾಡುತ್ತಿನಿ ಆಮೇಲೆ ನಾನೆ ಇರುತ್ತಿನೊ ಇಲ್ಲವೋ !! ಅಂತ ತಮ್ಮ ಗಂಡನಿಗೆ ಹೇಳಿದರು ಅವರು ಬೈದು ಮುಂದೆ ಹೊರಟರು.

ಇಳಿ ವಯಸ್ಸಲ್ಲೂ ಎಷ್ಟು ಭಾವನೆಗಳ ಎರಿತಗಳು, ಎರಡು ಬೇರೆ ಬೇರೆ ವ್ಯಕ್ತಿ ವ್ಯಕ್ತಿತ್ವಗಳು ಅವರ ಅವರ ನೇರಕ್ಕೆ ಮತ್ತು ತಮ್ಮದೆ ದೃಷ್ಟಿಕೋನಗಳಿಂದ ಅನುಭವಗಳಿಂದ ಮಾತನಾಡಿದರು. ಯಾವುದು ಸರಿ ತಪ್ಪು ನನಗೆ ಗೊತ್ತಿಲ್ಲ,

ಹಾಗದರೆ ಈ ಎರಡು ಮನಸ್ಥಿಗೆ ಕಾರಣ ಯಾರು ?? ನಮ್ಮ ಸಮಾಜ, ನಾವು ? ಕೇರಿಯರ್, ಮನೆ, ದುಡ್ಡು, ಶ್ರೀಮಂತಿಕೆ ಇಷ್ಟೇ ಬದುಕು ಅಂತ ಪುಟ್ಟ ಸಂತೋಷಗಳ್ನಾ ಹಾಳು ಮಾಡಿಕೊಂಡಿದ್ದೇವೆ. ಹಾಗಂತ ನನಗೆ ಬೇಡ, ನಾನು ಆಶಾವಾದಿ ಅದ್ದೆಲ್ಲಾ ಜೀವನ, ಆದರ ಅಚೆಗು ಇದೆ ಅಂತ ಬೊಧನೆ ಮಾಡಿದರು. ನನ್ನ ಗ್ರಹಿಕೆಯ ಕೊನೆ ಹಂತ ದುಡ್ಡೆ. ನಮ್ಮಲ್ಲಿ ಇದ್ದ ಮಗುವೊಂದನ್ನಾ ನಾವು ಮರೆತೆವೆ ಅಥಾವ ನಾವೆ ಕೊಲೆ ಮಾಡಿದ್ದೇವಾ??, ಕಾರಣ ಮಾತ್ರ ಇನ್ನೂ ಗೋತ್ತಿಲ್ಲಾ.

ಕ್ರಶ್ ಏಂಬ ಮಾಯಲೋಕ !!

ಅದು ಕಾಲೇಜ್ ಮೊದಲನೆ ದಿನ, ಒಂದು ಗುಂಪು ಹೀಗೆ ಅಲೆದಾಡುವಾಗ ಅವನ್ನನ್ನು ನೊಡಿದೆ, ಊಫ್ ಅದೇ ಮೊದಲು ಈ ಅನುಭವ ಆಗಿರಲ್ಲಿಲ್ಲ!! ಆ ಅನುಭವಕ್ಕೆ ಕೊಟ್ಟ ಹೆಸರು ಕ್ರಶ್!! ಸರಿ ಕ್ರಶ್ ಹೆಸರು?? ಇದೆಯಲ್ಲಾ ಫೇಸ್ಬುಕ್ ಮ್ಯೂಚೂಯಲ್ ಆಕೌಂಟ್ಗಳ ಮೂಲಕ ಹುಡುಕಿದೆ, ಹೆಸರು ಸಿಕ್ಕಿತ್ತು ಆದರೆ ಮುಂದೆ ?, ಇದು ಅಕರ್ಷಣೆ ಅಥವಾ ನಿಜವಾದ ಲವ್ ಅನ್ನೋ ಪ್ರಶ್ನೆ. ಎರಡು ಅಲ್ಲಾ !!. ನಮ್ಮ ಮನಸ್ಥಿತಿ ಅಷ್ಟೇ ಇದನ್ನ ಅರಿಯಲು ಟೈಮ್ ಆಗುತ್ತೆ. ಈಗಿನ ಜನರೆಷನ್ ಹಾಗೆ ದಿನಕ್ಕೊಂದು ಕ್ರಶ್, ಲವ್ ಅಂತ ವಾಸ್ತವದ ಅರಿವಿಲ್ಲದೆ ಇರುತ್ತಾರೆ, ಹಾಗಂತ ಕ್ರಶ್,ಲವ್ವರ್ ಇರಬಾರದು ಅಂತ ಅಲ್ಲಾ, ಕೆಲವೊಮ್ಮೆ ಆಗೋ ಕ್ರಶ್ಗಳಿಂದ ಅನುಕೂಲ ಜಾಸ್ತಿ ಬೋರಿಂಗ್ ಕ್ಲಾಸ್ಗಳಲ್ಲಿ ಪ್ರತಿ ದಿನ ಹೊಸ ಕವಿ ಹುಟ್ಟುತ್ತಾನೆ, ಸುರಿಯೋ ಸೋನೆ ಮಳೆ ಹಿತ ಆನಿಸುತ್ತೆ, ಮೊಹಮದ್ ರಫೀ ಹಾಡು ಖುಷಿ ಕೊಡುತ್ತೆ, ನಮ್ಮ ಒಳಗೆ ಇರೊ ಒಬ್ಬ ರಘುದೀಕ್ಷಿತ್/ ಶ್ರೇಯಾ ಘೋಷಲ್ ಆಚೆ ಬರುತ್ತಾರೆ. ಆದರೆ ಈ ಮಾಯ ಪರಪಂಚ ಎಷ್ಟು ದಿನ??. 1,2, 3 ದಿನಗಳ?? ಅಲ್ಲಾ, ಇನ್ನೊಬ್ಬರು ಸಿಗೋ ತನಕ. ಬದುಕು ಜಾತ್ರೆ ತರಹ ಬಂದು ಹೋಗೊ ಮಂದಿ ಜಾಸ್ತಿ, ಅದರೆ ಯಾರು ಕೊನಗೆ ಉಳಿಯಲ್ಲಾ!! ಹಾಗಂತ ಕ್ರಶ್ ಇರಬಾರದು ಅಂತ ಅಲ್ಲ ಭಾವನೆಗಳನ್ನಾ ಬೇಸೆಯೋರು ತುಂಬಾ ಕಡಿಮೆ. ಆಕರ್ಷಣೆ ಸಹಜ ಆದರೆ ಅತೀ ಆದರೆ ಎಲ್ಲವು ಕಷ್ಟ. ನಾ ಮಾತನಾಡುವುದು ಇಲ್ಲಿ ಯಾರಿಗೂ ಅರ್ಥವಾಗುವುದಿಲ್ಲ. ಯಾಕೆ ಅಂದರೆ ಲವ್, ಕ್ರಶ್ ನನಗೆ ದೂರನೇ !! ಎಲ್ಲಾ ಅಕ್ಷರಗಳಿಗೆ ಸೀಮಿತ, ಹಿಂದೆ ಸಂಸಾರ ಮಗು ಮಕ್ಕಳನ್ನಾ ದ್ವೇಷ ಮಾಡುತ್ತಾ ಇದ್ದೇ, ಕಲ್ಲು ನಿನ್ನ ಹೃದಯ ಅಮ್ಮ ಬೈದಿದ್ದದು ಈಗಲೂ ನೆನಪು ಇದೆ. ನಂತರ ಪುಸ್ತಕ, ಸಂದರ್ಭಗಳು ಬದಲಿಸಿತು. ಕೊನೆಯ ಪುಟ ವಿಷಾದ ಭಾವ, ನಿಜವಾದ ಭಾವನೆಗಳ ಕೊರತೆ ಇದೆ !! ಯಾವಗಲು ಹೇಳೊ ಹಾಗೆ “ಮನುಷ್ಯ ಹೆಂಗಾದರು ಬದುಕಬಲ್ಲಾ ಸಾವು, ನೋವು ಎನು ಇಲ್ಲವೆಂಬತೆ ಆದರೆ ಭಾವನೆಗಳು ಇಲ್ಲದೆ ಬದುಕಲಾರ”. ಈ ಅಕ್ಷರಗಳು ಕೊನೆಗೆ ನನ್ನ ವೇದಾಾಂತಿ ಮಾಡಿದವು

ಪ್ರೀಯವಾದ ನಿಸ್ವಾಥ೯ತೆ ಮೆರೆದಳು !!

ಅಪ್ಪ ಸ್ವಲ್ಪ ದಿನಗಳ ಇಂದ ಬೆಂಗಳೂರಿಗೆ ಕೆಲಸಕ್ಕೆ ಓಡಾಡುತ್ತಾ ಇದ್ದರೂ, ದಿನ ಟ್ರೈನ್ ಅಲ್ಲಿ ಓಡಾಟ. ಹೀಗೆ ಒಂದು ದಿನ ಇಬ್ಬರೂ ವಯಸ್ಸಾಗಿದ್ದ ಅಜ್ಜ ಅಜ್ಜಿ ಹತ್ತಿದರಂತೆ ಅಪ್ಪನ ಸರ್ ಸೀಟು ಬಿಟ್ಟು ಕೋಡಿ ಅಂದರಂತೆ. ಅಪ್ಪ ಆದಕ್ಕೆ ಯಾಕೆ ಇಷ್ಟೋಂದು ಕೇಳುತ್ತಿರಾ
ಅಂತ ಅವರಿಬ್ಬರಿಗೂ ಜಾಗ ಕೊಟ್ಟರಂತೆ. ಹೀಗೆ ಕುಶಲೋಪರಿ ವಿಚಾರಣೆ ಮಾಡುತ್ತಾ ನಮ್ಮ ಅಪ್ಪ ನನ್ನ ಮಗಳು ಇಂಜಿನಿಯರಿಂಗ್ ಈಗ ಒಂದು ವಾರ ಆಯ್ತು ಮುಗಿಸಿ ಕೆಲಸ ಹುಡುಕುತ್ತಾ ಇದ್ದಾಳೆ ಅಂದರು, ಅದಕ್ಕೆ ಅವರು ನನ್ನ ಸೊಸೆ ಇದ್ದಾರೆ ಅವರ ಸಹಾಯ ಮಾಡುವಳು ಅಂತ ನಂಬರ್ ಕೊಟ್ಟು ನಾನು ಹೇಳುವೆ ಅಂದರು. ಅಪ್ಪ ಆಫೀಸ್ ಇಂದ ಫೋನ್ ಮಾಡಿ ಈ ತರಹ ಆಯ್ತು ಅಂತ ಹೇಳಿ ನಂಬರ್ ಕೊಟ್ಟ ಸಂಜೆ ಫೋನ್ ಮಾಡಬೇಕು ಅಂತ ತಾಕಿತು ಮಾಡಿದರು. ಸ್ವಲ್ಪ ಸ್ವಾಭಿಮಾನ ಜಾಸ್ತಿ ನನಗೆ ,ಅವರ ಸೊಸೆಗೆ ಮಾಡ್ಲ ಬೇಡ್ವ ಅಂತ ಯೋಚನೆ, ಅಮ್ಮ ಅಪ್ಪ ಬೈದು ಬುದ್ಧಿ ಹೇಳಿ ಫೋನ್ ಮಾಡಿಸಿದರು. ಅವರಿಗೆ ಕಾಲ್ ಮಾಡಿದೆ ಮೊದಲನೆ ಬಾರಿ ರಿಸೀವ್ ಮಾಡಿಲ್ಲ, ಆಮೇಲೆ ಅವರೇ ಕಾಲ್ ಮಾಡಿ ಮಾತಾಡಿ ನನ್ನ ಡಿಟೇಲ್ಸ್ ಕೇಳಿದರು. ಎಲ್ಲಾ ಆಯ್ತು ಒಂದು ದಿನ ಆರೇಕಲ್ ಇಂದ ಸಂದರ್ಷ್ನ ಇತ್ತು, ಅವರಿಗೆ ಫೋನ್ ಮಾಡಿ ಅಪ್ಪ ಮುಂಚೆಯೇ ಮಾತಾಡಿದ್ದರು, ನಾನು ಫೋನ್ ಮಾಡಿ ಹೇಳಿದೆ ಅವರು ಎನು ಮಾಡ ಬೇಕು ಬೇಡ ಹೇಳಿ ಮಾತು ಮುಗಿಸಿದರು. ಯಾಕೊ ಆ ಕ್ಷಣ ನಮ್ಮ ಅಮ್ಮ ಹೇಳಿದ ಹಾಗೆ ಆನಿಸಿತು. ಸಂದರ್ಷನ ಮುಗಿಸಿ ಮನೆ ಕಡೆ ಹೊರಟೆ, ಮಾರನೆ ದಿನ ಮೆಸೇಜ್ ಬಂದಿತ್ತು ಎನಾಯ್ತು ಅಂತ ನಾನು ಆ ಕ್ಷಣ ಕಳೆದು ಹೊಗಿದ್ದೆ, ವಾಪಸ್ ಮಾತಾಡಿ ಹೇಳಿದೆ.
ನಂತರ ನನಗೆ ಕೆಲಸ ಸಿಕ್ಕಿತು ನನ್ನದು ಯಾವ ಸಾಧನೆ ಇದರಲ್ಲಿ ಇಲ್ಲ ನನ್ನ ಬೆನ್ನ ಹಿಂದೆ ನಿಂತು ಪ್ರತಿ ಹೆಜ್ಜೆಯಲ್ಲಿ ಕಾದಿದ್ದು ಅವರು (she used to motivate me like anything). ನಾನು ಅವರಿಗೆ ಎನು ಅಂತ ಗೋತ್ತಿಲ್ಲ ಅವರು ನನಗೆ ಒಳ್ಳೆ ಗೆಳತಿ, ಗೈಡ್ (in fact Best friend).
The best part is we have not met, neither we have seen each other.
ನಕ್ಷತ್ರಗಳ ಮೂಟೆ ಬೆನ್ನಿಗೆ ಕಟ್ಟಿದವಳು
ನೆಲಕ್ಕೆ ಕಣ್ಣ ನೆಟ್ಟವಳು, ನಕ್ಕಳು ಎಲ್ಲವೂ ನಿನ್ನದೆ ಅಂತ ಪ್ರೀಯವಾದ ನಿಸ್ವಾಥ೯ತೆ ಮೆರೆದಳು !!

ಅಮ್ಮ ಹೇಳಬೇಕಿತ್ತು !!

ಅವತ್ತು ಆಗಿನ್ನು ಶುರುವಾಗಿದ್ದ “ಮಗಳು ಜಾನಕಿ” ಸೀರಿಯಲ್ ನೋಡುತ್ತಾ ಇದ್ವಿ, ಆ ಸೀರಿಯಲ್ ಅಲ್ಲಿ ‘ಸಿಎಸ್ಪಿ‘ ಹಿಡಿಯೋ ಕಾಲ್ಂದ್ಗೆ ನೋಡಿ ಅಮ್ಮಯಾಕೋ ಹೇಳದೆ ಎದ್ದು ಬಂದರು!!ಯಾಕಮ್ಮಅಂತ ಕೇಳಿದರೆ ನನ್ನ ಆ ಪುಟ್ಟ ಕಾಲ್ಂದ್ಗೆ ನೋಡಿ ಅವರು ಅತ್ತರು. ಯಾವಾಗಲು ನಮ್ಮ ಅಪ್ಪ ಅಮ್ಮ ನನ್ನ ರೆಗಿಸುತ್ತ ಇರುತ್ತಾರೆ ನಮ್ಮ 25 ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ನಿನ್ನ 1ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಬೇಕು ಅಂತ ನಾನು ನಕ್ಕು !!ದೊಡ್ಡ ವೇದಾಂತಿ ತರಹ ಜೀವನ, ಅದು ಇದು ಅಂತ ಮಾತು ಮರೆಸುತ್ತಿನಿ. ಹೇಗು ಸ್ವಲ್ಪ ದಿನ ರಜಾ ಇತ್ತು ಪುಸ್ತಕ, ಹಾಡು ಅಂತ ಕಾಲ ಕಳೇದೆ ಈಗ ಕನಸು, ಕೇರಿಯರ್ ಒಂದು ಕಡೆ ಆದರೆ, ಭಾವನೆಗಳ ಎರು ಪೇರು ಮತ್ತೋಂದು ಕಡೆ. ಎಲ್ಲಾದಕ್ಕೂ ಅಮ್ಮ ಅಮ್ಮ ಅಂತ ಕಿರುಚೊ ನಾನು ಅವಳಿಲ್ಲದೆ ವಾರದ 4 ದಿನ ಕಳೆಯ ಬೇಕು. ಅಮ್ಮ ಹೇಳಬೇಕಿತ್ತು ಈ ಭಾವನೆಗಳನ್ನು ಹೇಗೆ ಹೇಳೋದು ಅಂತ !! ಈಗ ಅವಳು ಇಲ್ಲದ ಸಮಯದ ಬೇಲೆ ಗೊತ್ತಾಗುತ್ತಾ ಇದೆ ,,,!

!

My life, but his choice

Responsibilities were nothing to me, but now for me each and every step I take is the results of long thought processing!!
The child inside me started dying with these steps. I just lost the innocent me as I grew. Can I go back to my childhood once again please!!😐
All I wanted was a dream land!! yeah but the fate had its own plan and it landed me in some other place, and I turned barren land into my dream land😂😂. Funny yeah it seems like that but those struggle,desire, instincts burnt me long the way!!
There’s something unique and eccentric that defines each one of us, that tells us apart from everyone else in the world. Find your own quirk discover that one thing that defines you as a person and embrace it. Unravel your true self.

!!

ಎಂದು ಮೂಡದ ಕವಿತೆಯಲ್ಲಿ
ಈಗ ನಿನ್ನದೆ ಹಾಡುಗಾರಿಕೆ
ಎದೆ ರಾಗವ ಸಿಂಪಡಿಸುವ ಮನವರಿಕೆ!!!
ಸಂಚಾರಿ ಮೇಘಗಳ ಸಂಚಾರಿ
ಮೂಡಿಸಲೆ ಮನದ ಚಿತ್ರವ ನಿನ್ನ ನೋಡಲು
ಮೂಕ ವಿಸ್ಮವಿತನಾದಂತೆ!!
ಮರೆತಂತಿದ್ದರು ಕನಸೋಂದು ಕಾಡಿದೆ
ಮೆಲ್ಲಗೆ ನೆನಪು ಜಾರಿದೆ!!